ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ನೀಡಲಾಗಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕನ ಸಂಸತ್ ಸದಸ್ಯತ್ವದ ಅನರ್ಹತೆ ತೆರವಿಗೆ ದಾರಿ ಸುಗಮವಾಗಿದೆ. ಶಿಕ್ಷೆಗೆ ತಡೆ ಲಭಿಸಿರುವುದರಿಂದ ಮುಂದಿನ ಚುನಾವಣೆಯಲ್ಲಿ ರಾಹುಲ್ ಸ್ಪರ್ಧಿಸುವ ಅವಕಾಶವನ್ನೂ ಮರಳಿ ಪಡೆದುಕೊಂಡಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮೊದಲೇ ಅವರ ಶಿಕ್ಷೆಗೆ ತಡೆ ಲಭಿಸಿರುವುದರಿಂದ ಮುಂದಿನ ಚುನಾವಣೆಯಲ್ಲೇ ರಾಹುಲ್ ಅವರು ಪ್ರಕರಣದ ಅಂತಿಮ ಆದೇಶ ಹೊರಬೀಳುವವರೆಗೂ ಸ್ಪರ್ಧಿಸಬಹುದಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕನಿಷ್ಠ