ಹಲವೆಡೆ ಪ್ರವಾಹ ಉಂಟಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ, ಬೆಳೆ, ಆಸ್ತಿ ಪಾಸ್ತಿಗಳಿಗೂ ಹಾನಿಯಾಗಿವೆ. ಅದರಂತೆ ಪಂಜಾಬ್ ಮತ್ತು ಹಿಮಾಚಲದ ಗಡಿಯಲ್ಲಿರುವ ಕಾಂಗ್ರಾ ಜಿಲ್ಲೆಯ ಚಕ್ಕಿ ನದಿಯ ಮೇಲಿನ 800 ಮೀಟರ್ ಉದ್ದದ ರೈಲ್ವೆ ಸೇತುವೆ ಕುಸಿದಿದೆ. ಚಕ್ಕಿ ನದಿಗೆ ಹರಿಯುವ ಪ್ರವಾಹಕ್ಕೆ ಪಿಲ್ಲರ್ ಕೊಚ್ಚಿಹೋಗಿ ಈ ಅವಘಡ ಸಂಭವಿಸಿದೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ. ಪರಿಣಾಮವಾಗಿ ಸೇತುವೆಗೆ ಹೊಸ ಪಿಲ್ಲರ್ ನಿರ್ಮಾಣವಾಗುವವರೆಗೆ ಪಠಾಣ್ಕೋಟ್ ಮತ್ತು ಜೋಗಿಂದರ್ ನಗರ ನಡುವಿನ ರೈಲು