ಮುಂಬೈ : ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಸಿ.ಆರ್.ಪಿ.ಎಫ್ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಡೆದಿದ್ದ ಸಭೆಯಲ್ಲಿ ರೈಲ್ವೆ ಇಲಾಖೆಯ ಟಿಕೆಟ್ ಕಲೆಕ್ಟರ್ (ಟಿಸಿ)ಯೊಬ್ಬ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾನೆ. ಈತ ಲೋನಾವಾಲ ರೈಲು ನಿಲ್ದಾಣದ ಉಪೇಂದ್ರಕುಮಾರ್ ಶ್ರೀವೀರ್ ಬಹಾದೂರ್ ಸಿಂಗ್ (39) ಎಂಬುದಾಗಿ ತಿಳಿದುಬಂದಿದೆ. ಲೋನಾವಾಲದ ಶಿವಾಜಿ ಚೌಕ್ನಲ್ಲಿ ಸ್ಥಳೀಯರು ಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಉಪೇಂದ್ರಕುಮಾರ್ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪುಣೆ ಗ್ರಾಮಾಂತರ