ಬೆಂಗಳೂರು: ರಾಜ್ಯದ ಒಳನಾಡಿನಲ್ಲಿ ನೈರುತ್ಯ ಮುಂಗಾರು ಸಾಮಾನ್ಯವಾಗಿದ್ದು, ಕರಾವಳಿಯಲ್ಲಿ ದುರ್ಬಲವಾಗಿತ್ತು. ಬುಧವಾರ ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಒಳನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ. ತೊಂಡೇಭಾವಿಯಲ್ಲಿ 13 ಸೆಂ.ಮೀ., ಚಿಕ್ಕಬಳ್ಳಾಪುರದಲ್ಲಿ 11 ಸೆಂ. ಮಿ., ಕೋಲಾರದ ಮುಳಬಾಗಲಿನಲ್ಲಿ 10 ಸೆಂ.ಮೀ., ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ 8 ಸೆಂ.ಮೀ., ಗೌರಿಬಿದನೂರಿನಲ್ಲಿ 7 ಸೆಂ.ಮೀ., ಕೋಲಾರ ಜಿಲ್ಲೆ ರಾಯಲ್ಪಾಡುನಲ್ಲಿ 6 ಸೆಂ.ಮೀ., ಚಿಂತಾಮಣಿಯಲ್ಲಿ 5 ಸೆಂ.ಮೀ., ಬೀದರ್ನ ಜನವಾಡದಲ್ಲಿ 4