ಬೆಂಗಳೂರು: ನಿನ್ನೆ ರಾತ್ರಿ ಸುರಿದು ಅನಾಹತ ಸೃಷ್ಟಿಸಿದ್ದ ಮಳೆರಾಯ ಇಂದೂ ಬೆಂಗಳೂರು ನಗರಿಗರನ್ನು ಕಾಡುವಂತೆ ತೋರುತ್ತಿದ್ದಾನೆ.ಈಗಾಗಲೇ ನಗರದ ಕೆಲವೆಡೆ ವರುಣರಾಯ ಸುರಿಯಲು ಪ್ರಾರಂಭವಾಗಿದ್ದು, ನಗರವಾಸಿಗಳು ಕಚೇರಿ, ಕಾಲೇಜು ಮುಗಿಸಿ ಮನೆಗೆ ಮರಳಲು ಅಡ್ಡಿಪಡಿಸುತ್ತಿದ್ದಾನೆ.ನಗರದಾದ್ಯಂತ ಗುಡುಗು, ಗಾಳಿ ಸಹಿತ ಮಳೆ ಈಗಾಗಲೇ ಪ್ರಾರಂಭವಾಗಿದ್ದು, ರಾತ್ರಿ ವೇಳೆ ಇನ್ನಷ್ಟು ಮಳೆ ಸುರಿಯುವ ಸಂಭವವಿದೆ. ಮಳೆಯಿಂದಾಗಿ ನಿನ್ನೆಯೇ ಕೆಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಈಗಾಗಲೇ ಹವಾಮಾನ ಇಲಾಖೆ ಇನ್ನೂ ಎರಡು ದಿನ ಭಾರೀ ಮಳೆಯಾಗುವ