ಬೆಂಗಳೂರಲ್ಲಿ ತಡರಾತ್ರಿ ಸುರಿದ ಬಾರೀ ಮಳೆ ಹಿನ್ನೆಲೆ ಯಲಹಂಕ ಬಳಿಯ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಗೆ ಮಳೆ ನೀರು ನುಗ್ಗಿದೆ.ಅಪಾರ್ಟ್ಮೆಂಟ್ ಬಳಿ ಬಂದು ಅಗ್ನಿಶಾಮಕ ದಳ ನೀರು ತೆರವು ಮಾಡಿದೆ.ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್ ಮೆಂಟ್ ಬಳಿ ಒಂದು ಅಗ್ನಿಶಾಮಕ ದಳ ವಾಹನ ನಿಯೋಜನೆ ಮಾಡಿತ್ತು.ಅಪಾರ್ಟ್ಮೆಂಟ್ ನ ಬೇಸ್ಮೆಂಟ್ ನ್ನ ಕಾರು, ಬೈಕ್ ಗಳು ಮುಳುಗಿದ್ದು,ಮಳೆ ನೀರನ್ನ ಲ ಅಗ್ನಿಶಾಮಕ ಸಿಬ್ಬಂದಿ ತೆರವುಮಾಡಿದ್ದಾರೆ.