ಮತ್ತೆ ಶನಿವಾರದಿಂದ ಮಳೆಯ ಅರ್ಭಟ

bangalore| geetha| Last Modified ಗುರುವಾರ, 25 ನವೆಂಬರ್ 2021 (20:30 IST)
ಬೆಂಗಳೂರು: ಕಳೆದ ವಾರದಿಂದ ಅಬ್ಬರಿಸಿದ್ದ ಮಳೆ ವಿರಾಮ ನೀಡಿದ್ದ ಮಳೆ ಶನಿವಾರದಿಂದ ಮತ್ತೆ ಅರ್ಭಟಿಸುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಗುರುವಾರ ಮತ್ತು ಶುಕ್ರವಾರ ಚುದುರಿದ ಮಳೆಯಾಗಲಿದೆ. ಶನಿವಾರದಿಂದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ಕರಾವಳಿ ಪ್ರದೇಶದಲ್ಲಿ ಗಾಳಿ ಒತ್ತಡದಿಂದ ಕೂಡಿದೆ. ಇದರ ನೇರ ಪರಿಣಾಮ ರಾಜ್ಯಕ್ಕೆ ಬೀಳಲಿದೆ. ಇದರಿಂದ ವಾರಾಂತ್ಯದಲ್ಲಿ ಮಳೆ
ಪ್ರಮಾಣ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿಗೆ ವ್ಯಾಪಕ ಮಳೆ ಸಾಧ್ಯತೆ:
ಇದೀಗ ಬರುತ್ತಿರುವ ಮಳೆಗೆ ಮಹಾನಗರ ಬೆಂಗಳೂರು ತತ್ತರಿಸಿದ್ದು, ಶನಿವಾರದಿಂದ ವ್ಯಾಪಕ ಮಳೆಯಾಗಲಿದೆ. ಬಳ್ಳಾರಿ, ಕೊಪ್ಪಳ, ತುಮಕೂರು, ಬೆಳಗಾವಿ, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :