ಅಪ್ಪು ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ದೊಡ್ಮನೆ ಕುಟುಂಬ ಅಪ್ಪು ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ರಾಜ್ ಫ್ಯಾಮಿಲಿ ಅಪ್ಪುಗೆ ಇಷ್ಟವಾದ ತಿಂಡಿ ತಿನಿಸು ಮಾಡಿ ವಿಶೇಷ ನೈವೇದ್ಯವನ್ನು ಅರ್ಪಿಸಿದರು. ಅಪ್ಪು ಸಮಾಧಿಯತ್ತ ಬರುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗು ಮಕ್ಕಳು ಭಾವಕದರು. ತಂದೆಯನ್ನು ನೆನೆದು ಭಾವುಕರಾದ ಅಪ್ಪು ಪುತ್ರಿಯನ್ನು ರಾಘವೇಂದ್ರ ರಾಜ್ಕುಮಾರ್ ಸಂತೈಸಿದರು. ಇನ್ನು ಗಾಜನೂರಿನಿಂದಲೂ ಸಂಬಂಧಿಕರು ಬಂದಿದ್ದರು. ಇಡೀ ದೊಡ್ಮನೆ ಕುಟುಂಬ ಅಪ್ಪು ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿದ್ಧಾರೆ.