ತುಮಕೂರು :ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಲು ಮುರಳಿಧರ ಹಾಲಪ್ಪ ವಿರೋಧ ವ್ಯಕ್ತಪಡಿಸುತ್ತಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎನ್.ರಾಜಣ್ಣ, ಯಾವ ಸಿಕ್ಕಾಪಟ್ಟೆ ರೇಸ್ ನಡೀರೀ, ಯಾರ್ರೀ ಅವನು ಮುರಳೀಧರ ಹಾಲಪ್ಪ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ಅವನನ್ನು ನೀವೇ ರೇಸ್ ಗೆ ತಗೊಂಡೋಗಿ ಮುಂದೆ ಕೂರಿಸಿದ್ದೀರಿ ಅಷ್ಟೇ. ಯಾರಿಗೆ ವೋಟ್ ಹಾಕ್ಸಿದ್ದಾನ್ರೀ ಅವನು, ನನ್ನ ಕ್ಷೇತ್ರ ಮಧುಗಿರಿಯಲ್ಲಿ ನಾನು ಐದು ಚುನಾವಣೆ ನಡೆಸಿದ್ದೀನಿ. ಒಂದು ಚುನಾವಣೆಯಲ್ಲಿ ಒಂದು ವೋಟ್ ಹಾಕ್ಸಿದ್ದಾನಾ ಕೇಳ್ರಿ ಎಂದು