ನವದೆಹಲಿ(ಆ. 12): ಸಂಸತ್ ನ ಉಭಯ ಸದನಗಳ ಕಾರ್ಯ ಕಲಾಪಕ್ಕೆ ವಿಪಕ್ಷದ ಸದಸ್ಯರು ಅಡ್ಡಿ ಪಡಿಸುತ್ತಲೆ ಬಂದಿದ್ದಾರೆ. ಈ ವಿಚಾರಕ್ಕೆ ಖೇದ ವ್ಯಕ್ತಪಡಿಸಿದ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಕಣ್ಣೀರು ಹಾಕಿದ್ದಾರೆ. ಮಾತನಾಡುತ್ತ ಇರುವಾಗಲೇ ನಾಯ್ಡು ಗದ್ಗದಿತರಾದರು. ಸದನದಲ್ಲಿ ವಿರೋಧ ಪಕ್ಷದ ಸಂಸದರಿಂದ ಮಂಗಳವಾರ ನಡೆದ ಗದ್ದಲದ ಬಗ್ಗೆ ಮಾತನಾಡುತ್ತ ಕಣ್ಣೀರಾದರು. ಮಾಧ್ಯಮದ ವರದಿಗಾರರು ಕುಳಿತುಕೊಳ್ಳುವ ಜಾಗಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಆದರೆ ವಿಪಕ್ಷ ನಾಯಕರು ನಡೆದುಕೊಂಡ ವರ್ತನೆ