ಬೆಂಗಳೂರು: ವಿಧಾನಸೌಧದ ಕಮಿಟಿ ರೂಂನಲ್ಲಿ ನಡೆಯುತ್ತಿರುವ ರಾಜ್ಯ ಸಭೆ ಚುನಾವಣೆಯಲ್ಲಿ ಮತದಾನ ಮಾಡುವಾಗ ಕಾಂಗ್ರೆಸ್ ಶಾಸಕ ಕಾಗೋಡು ತಿಮ್ಮಪ್ಪ ಎಡವಟ್ಟು ಮಾಡಿದ್ದಾರೆ.ಮತ ಚಲಾಯಿಸುವಾಗ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಬದಲು ಬ್ಯಾಲೆಟ್ ಪೇಪರ್ ನಲ್ಲಿ ಬೇರೆ ಅಭ್ಯರ್ಥಿ ಹೆಸರಿನ ಎದುರು ಸೀಲ್ ಹಾಕಿದ್ದಾರೆ. ಕಾಂಗ್ರೆಸ್ ಏಜೆಂಟ್ ಗೆ ಮತ ಪತ್ರ ತೋರಿಸಿದಾಗ ಈ ಎಡವಟ್ಟು ಬಯಲಾಗಿದೆ.ಬಳಿಕ, ಮತ್ತೊಂದು ಮತ ಪತ್ರ ಪಡೆದು ಕಾಗೋಡು ತಿಮ್ಮಪ್ಪ ಸರಿಯಾದ ಅಭ್ಯರ್ಥಿಗೇ ಮತ ಚಲಾಯಿಸಿದರು.