ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ ಆಗಿರುವಂತೆ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ.ಈ ನಡುವೆ ಪಕ್ಷೇತರ ಶಾಸಕ ಆರ್ ಶಂಕರ್ ಹೇಳಿಕೆ ನೀಡಿದ್ದು, ಈಗಲೇ ನಾನು ಏನೂ ಮಾತನಾಡೋದಿಲ್ಲ. ಕೆಪಿಸಿಸಿ ಅಧ್ಯಕ್ಷರು ಸೌಜನ್ಯಕ್ಕೆ ಬರಲು ಹೇಳಿದ್ದರು ಬಂದಿದ್ದೇನೆ. ನೋಡೋಣ ಕಾಂಗ್ರೆಸ್ ಯಾವಾಗ ಸೇರೋದು ಅಂತ.ಸಚಿವ ಸ್ಥಾನ ಸಿಕ್ಕಿದ ಮೇಲೆ ತಾನೇ ಎಲ್ಲರೂ ಅಭಿನಂದನೆ ಹೇಳೋದು.? ನನಗೂ ಸಚಿವ ಸ್ಥಾನದ ಅಧಿಕೃತ ಮಾಹಿತಿ ಬಂದಿಲ್ಲ. ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಗೌಪ್ಯತೆ ಕಾಪಾಡಿಕೊಳ್ಳುವುದಾಗಿ ಮಾಧ್ಯಮಗಳಲ್ಲಿ ಹೇಳಿದ್ದನ್ನು