ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ನ ಹಿರಿಯ ರಾಜಕಾರಣಿ, ರಾಮಲಿಂಗಾರೆಡ್ಡಿ ಎಂಟನೇ ಬಾರಿಗೆ ಶಾಸಕರಾಗಲು ಬಿಟಿಎಂ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿದ್ದಿದ್ದಾರೆ. ಇಂದು ಬಿಟಿಎಂ ಲೇಔಟ್ ನ ಮದ್ದೂರಮ್ಮ ಬಡಾವಣೆ, ಗುಂಡು ತೋಪು ಬಡಾವಣೆ, ಅಯ್ಯಪ್ಪ ದೇವಾಸ್ಥಾನ ಬೀದಿ ಸೇರಿದಂತೆ ವಿವಿಧ ಕಡೆ ಮತಯಾಚನೆ ನಡೆಸಿದ್ರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಭ್ರಷ್ಟ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ ಈ ಸಾರಿ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೇಂದು ಹೇಳಿದ್ರು