ಬೆಳಗಾವಿ : ಬೆಳಗಾವಿ ಗ್ರಾಮೀಣ ಶಾಸಕರನ್ನ ಗೆಲ್ಲಿಸಿದ್ದು ನನ್ನ ತಪ್ಪು ಎಂದು ಶಾಸಕ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಸಂಸ್ಕೃತಿಯ ಹೆಣ್ಣುಮಗಳೆಂದು ನಾನು ಗೆಲ್ಲಿಸಿದೆ. ಅವರನ್ನು ಗೆಲ್ಲಿಸಿದ ತಪ್ಪಿಗೆ ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ. ಇನ್ಮುಂದೆ ಈ ರೀತಿಯಾಗಬಾರದು. ಮರಾಠಿ ಸಮುದಾಯದ ಮುಖಂಡರೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದ್ದಾರೆ. ಹಾಗೇ ನಿವೆಲ್ಲಾ ಒಂದಾಗಿ ನಿಮ್ಮಲ್ಲಿ ಒಬ್ಬರು ಮುಂದಿನ