ಬೆಂಗಳೂರು: ರಾಸಲೀಲೆ ಸಿಡಿ ವಿವಾದದ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳ ಎದುರು ಬಂದ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.ನನ್ನ ವಿರುದ್ಧ ಹಲವು ದಿನಗಳಿಂದ ಷಡ್ಯಂತ್ರ ನಡೆದಿದೆ. ಯಶವಂತಪುರದಲ್ಲಿರುವ ಫ್ಲ್ಯಾಟ್ ನ ನಾಲ್ಕನೇ ಫ್ಲೋರ್ ನಲ್ಲಿ ಮತ್ತು ಒರಾಯನ್ ಮಾಲ್ ಪಕ್ಕದ ಫ್ಲ್ಯಾಟ್ ನಲ್ಲಿ 5 ನೇ ಫ್ಲ್ಯಾಟ್ ನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬೇರೆ ಬೇರೆ ಭಾಗದ ರಾಜಕೀಯ ಪ್ರಭಾವಿಗಳು