Widgets Magazine

‘ರಮೇಶ ಜಾರಕಿಹೊಳಿ ಹಿ ಇಸ್ ಕಾಂಗ್ರೆಸ್ ಮ್ಯಾನ್’

ಚಿಕ್ಕೋಡಿ| Jagadeesh| Last Updated: ಶುಕ್ರವಾರ, 5 ಜುಲೈ 2019 (20:21 IST)
ಮಾಜಿ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಮುಂದೆಯೂ  ಕೊಡಲ್ಲ. ಅವರ ಮನ ಒಲಿಸುವ ಅಗತ್ಯ ಇಲ್ಲ. ಹಿ ಇಜ್ ಕಾಂಗ್ರೆಸ್ ಮ್ಯಾನ್ ಅವರು ಕಾಂಗ್ರೆಸ್ ನಲ್ಲಿ ಇರುತ್ತಾರೆ. ಹೀಗಂತ ಸಚಿವರೊಬ್ಬರು ಹೇಳಿದ್ದಾರೆ.  

ಅಥಣಿ ಪ್ರವಾಸಿ ಮಂದಿರದಲ್ಲಿ ಸಕ್ಕರೆ ಸಚಿವ ಆರ್. ಬಿ. ತಿಮ್ಮಾಪೂರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸರ್ಕಾರ ರಚನೆ ಆದಾಗಿನಿಂದ ಸರ್ಕಾರ ಪತನ ಆಗುತ್ತೆ ಅನ್ನುತ್ತಾರೆ, ಆದರೆ ಆಗಿಲ್ಲ. ರಾಜ್ಯದ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಿನಾಮೆ ಪರ್ವ ಮುಕ್ತಾಯಗೊಂಡಿದೆ ಎಂದರು.

80 ಕೋಟಿ ಬೇಡಿಕೆಯನ್ನು ಜಾರಕಿಹೊಳಿ ಇಟ್ಟಿರುವುದು ವದಂತಿ ಅಷ್ಟೇ. ರಮೇಶ್ ಜಾರಕಿಹೋಳಿ ನನ್ನ ಸ್ನೇಹಿತ. ಸಭಾಪತಿ ಹೇಳಿದ್ದಾರೆ ಅವರ ರಾಜೀನಾಮೆ ಅಧಿಕೃತವಲ್ಲ ಎಂದು ಹೇಳಿದ್ರು.

ಇನ್ನೂ ಮಹೇಶ್ ಕುಮಠಳ್ಳಿ ರಾಜಿನಾಮೆ ವಿಚಾರ ಸುಳ್ಳು ಊಹಾಪೋಹಗಳಿಗೆ ಬೆಲೆ ಕೊಡಲಾಗುತ್ತಿದೆ. ಕುಮಠಳ್ಳಿ  ಕಾಂಗ್ರೆಸ್ ಬಿಟ್ಟು ಹೊಗೋದಿಲ್ಲ. ಕಾಂಗ್ರೆಸ್ ನಲ್ಲಿ ಇದ್ದಾರೆ ಇರ್ತಾರೆ. ರಮೇಶ್ ಜಾರಕಿಹೊಳಿ ರಾಜಿನಾಮೆ ಕೊಟ್ಟಿಲ್ಲ, ಕೊಡಲ್ಲ. ಮನ ಒಲಿಸುವ ಅಗತ್ಯ. ಇಲ್ಲ ಹಿ ಇಜ್ ಕಾಂಗ್ರೆಸ್ ಮ್ಯಾನ್ ಅವರು ಕಾಂಗ್ರೆಸ್ ನಲ್ಲಿ ಇರುತ್ತಾರೆ ಎಂದ್ರು.

ಇದರಲ್ಲಿ ಇನ್ನಷ್ಟು ಓದಿ :