ಅನರ್ಹ ಶಾಸಕ ಮಹೇಶ್ ಕುಮಠಳ್ಳಿ ಕುರಿತು ಡಿ ಸಿ ಎಮ್ ಲಕ್ಷ್ಮಣ ಸವದಿ ಅವಾಚ್ಯ ಪದ ಪ್ರಯೋಗ ಮಾಡಿರೋದು ಜಾರಕಿಹೊಳಿಯವರನ್ನ ಕೆರಳಿಸಿದೆ.ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರೆಬೆಲ್ ಅನರ್ಹ ಶಾಸಕ ರಮೇಶ್ ಜಾರಕಿಹೋಳಿ, ತಮ್ಮ ಆಪ್ತ ಮಹೇಶ್ ಕುಮಠಳ್ಳಿ ಗೆ ಅವಾಚ್ಯ ಪದ ಬಳಕೆ ಮಾಡಿದ ಡಿಸಿಎಮ್ ಗೆ ತಿರುಗೇಟು ನೀಡಿದ್ದಾರೆ.ಲಕ್ಷ್ಮಣ ಸವದಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಕಳೆದ 2018 ರ ಚುನಾವಣೆಯಲ್ಲಿ ಹಿಗೆ ಮಾಡಿಯೇ ಸೋತಿದ್ದರು. ಅಧಿಕಾರ ಇರುತ್ತದೆ ಹೊಗುತ್ತದೆ.