ಕಾಂಗ್ರೆಸ್ ತೊರೆದು ಅನರ್ಹ ಶಾಸಕರಾಗಿ ಆ ಬಳಿಕ ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರೋ ಜಾರಕಿಹೊಳಿ ಕಾಂಗ್ರೆಸ್ ಗೆ ಮತ್ತೆ ಸೇರ್ಪಡೆಯಾಗಲಿದ್ದಾರೆಯೇ? ಇಂಥದ್ದೊಂದು ಪ್ರಶ್ನೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಡಿರೋ ಟ್ವೀಟ್ ನಿಂದಾಗಿ ಕೇಳಿ ಬರಲಾರಂಭಿಸಿದೆ. ಉಪ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಅನ್ನೋ ವದಂತಿಗಳು ಕೇಳಿಬರಲಾರಂಭಿಸಿವೆ. ಬಿಜೆಪಿ ಅನ್ನೋದು ತಲೆಕೆಡಿಸೋ ಕಾರ್ಖಾನೆ. ರಮೇಶ್ ಜಾರಕಿಹೊಳಿ ನಮ್ಮ ಜೊತೆ ಇರೋವಾಗ ಸರಿಯಾಗಿಯೇ ಇದ್ರು.