ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ, ಮಾಜಿ ಸಂಸದೆ ರಮ್ಯಾ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಸಭೆಗೆ ಆಗಮಿಸಿದ್ದ ರಮ್ಯಾಗೆ ವೇದಿಕೆಯಲ್ಲಿ ಕೂರಲು ಅವಕಾಶ ಕಲ್ಪಿಸದೇ ಸಿನಿಮಾ ನಟರ ಸಾಲಿನಲ್ಲಿ ಅವಕಾಶ ನೀಡಿದ್ದಕ್ಕೆ ರಮ್ಯಾಗೆ ಸಿಟ್ಟು ಬಂದಿದೆ.ಸೀದಾ ಹಿಂದಿನ ಸಾಲಿನಲ್ಲಿ ಕೂತ ರಮ್ಯಾ ಕಹಳೆ ಊದಲು ವೇದಿಕೆಗೆ ಬರುವಂತೆ ಸಚಿವ ಡಿಕೆ ಶಿವಕುಮಾರ್ ಕರೆದರೂ ಮೊದಲು ಬಾರದೇ