ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಂಗಾತಿ ಕುರಿತಾದ ಹಾಡೊಂದನ್ನು ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಹಂಚಿಕೊಂಡಿದ್ದ ಮೋಹಕತಾರೆ ಇದೀಗ ಅದೇ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಆದರೆ ಈ ಹಾಡು ಮುರಿದು ಬಿದ್ದ ಪ್ರೇಮಕಹಾನಿಗೆ ಹೇಳಿ ಮಾಡಿಸಿದ ಹಾಡು ಎಂಬುದು ವಿಶೇಷ. ಇದೀಗ ಹಳೆಯ ಸಂಗಾತಿಯನ್ನು ನೆನಪಿಸಿಕೊಳ್ಳುವಂತಹ ಹಾಡಿನ ರೀಲ್ಸ್ನಲ್ಲಿ ರಮ್ಯಾ ಮತ್ತೆ ಕಾಣಿಸಿಕೊಂಡಿದ್ದಾರೆ. ಯಾಕೆ ನೀನಿನ್ನೂ ಮದುವೆಯಾಗಿಲ್ಲ… ಎಂಬ