ನವದೆಹಲಿ: ಪ್ರಧಾನಿ ಮೋದಿ ಬಗ್ಗೆ ಆಗಾಗ ಟ್ವಿಟರ್ ನಲ್ಲಿ ಟಾಂಗ್ ಕೊಡುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಈಗ ಹಾಗೇ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ.ಪ್ರಧಾನಿ ಮೋದಿ ವಿದ್ಯಾರ್ಹತೆ ಬಗ್ಗೆ ಟೀಕಿಸಲು ವಿಡಿಯೋವೊಂದನ್ನು ಪ್ರಕಟಿಸಿದ್ದ ರಮ್ಯಾ ಟ್ವಿಟರಿಗರ ಕೈಯಲ್ಲಿ ಚೆನ್ನಾಗಿ ಮಂಗಳಾರತಿ ಮಾಡಿಸಿಕೊಂಡ ಮೇಲೆ ಕ್ಷಮೆ ಯಾಚಿಸಿದ್ದಾರೆ.ಕೆಲವು ವರ್ಷಗಳ ಹಿಂದೆ ಪ್ರಧಾನಿ ಮೋದಿಯನ್ನುಆಗ ಪತ್ರಕರ್ತರಾಗಿದ್ದ, ಹಾಲಿ ಸಂಸದ ರಾಜೀವ್ ಶುಕ್ಲಾ ಸಂದರ್ಶನ ಮಾಡುವ ವಿಡಿಯೋವನ್ನು ರಮ್ಯಾ ಪ್ರಕಟಿಸಿದ್ದರು.