ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಾಯ್ತಪ್ಪಿ ಯಡಿಯೂರಪ್ಪ ನಂ.1 ಭ್ರಷ್ಠ ಎಂದಿದ್ದು ಇದೀಗ ಕಾಂಗ್ರೆಸ್ ನಾಯಕರ ಲೇವಡಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕಾಂಗ್ರೆಸ್ ನಾಯಕರು ಅಮಿತ್ ಶಾ ಲೇವಡಿ ಮಾಡಿದ್ದಾರೆ.ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ, ಅಂತೂ ಅಮಿತ್ ಶಾಗೂ ಕೆಲವೊಮ್ಮೆ ಸತ್ಯ ಹೇಳಲು ಬರುತ್ತೆ ಎಂಬುದನ್ನು ನಿರೂಪಿಸಿಬಿಟ್ಟರು. ಯಡಿಯೂರಪ್ಪ ಅತೀ ಭ್ರಷ್ಟ ಎಂಬ ನಿಮ್ಮ ಅಭಿಪ್ರಾಯವನ್ನು ನಾವೆಲ್ಲಾ ಅನುಮೋದಿಸುತ್ತೇವೆ ಅಮಿತ್ ಜೀ ಎಂದು ರಮ್ಯಾ