ಹಾಡು ಹಗಲಲ್ಲೇ ಜೂಜು ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.ಹೊರರಾಜ್ಯದಿಂದ ಸವದತ್ತಿ ಯಲ್ಲಮ್ಮನಿಗೆ ಬರುವ ಭಕ್ತರ ಸಂಖ್ಯೆ ದಿನೆ ದಿನೇ ಹೆಚ್ಚುತ್ತಿದೆ. ಇನ್ನೊಂದೆಡೆ ಜೂಜಾಟ ರಾಜಾರೋಷವಾಗಿ ನಡೆದಿರುವುದು ಸ್ಥಳೀಯ ಭಕ್ತರನ್ನು ಕೆರಳಿಸಿದೆ. ಸ್ಥಳೀಯ ಅಧಿಕಾರಿ ಹಾಗೂ ರಾಜಕೀಯ ಮುಖಂಡರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಭಕ್ತಾಧಿಗಳು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೇರೆ ಕಡೆಯಿಂದ ಆಗಮಿಸಿರುವ ಈ ಜೂಜುಕೋರರಿಗೆ, ಪೊಲೀಸ್ ಇಲಾಖೆಯ ಭಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಅವರ ಮೇಲೆ ದೌರ್ಜನ್ಯಕ್ಕೆ ಮುಂದಾಗುತ್ತಿದ್ದಾರೆ.