ರಾಯಚೂರು : ರಾಜ್ಯದೆಲ್ಲೆಡೆ ಚುನಾವಣಾ ಕಾವು ದಿನೇ ದಿನೇ ಏರುತ್ತಿದೆ. ಆದರೆ ಬಿಸಿಲನಾಡು ರಾಯಚೂರಿನಲ್ಲಿ ಚುನಾವಣೆ ಬಿಸಿಯ ಜೊತೆ ಜೊತೆಗೆ ಬಿಸಿಲಿನ ತಾಪ ಕೂಡ ಏರುತ್ತಿದೆ. ಈ ವರ್ಷ ದಾಖಲೆಯ ತಾಪಮಾನ ದಾಖಲಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ರಾಯಚೂರು ಜಿಲ್ಲೆಯನ್ನು ಬಿಸಿಲನಾಡು ಎಂದು ಕರೆಯುವುದೇನೋ ನಿಜ. ಆದರೆ ಬಿಸಿಲಿನ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ. ಅದರಲ್ಲೂ ಪ್ರಸ್ತುತ ಚುನಾವಣಾ ವರ್ಷದಲ್ಲಿ ರಣಬಿಸಿಲು ಎಲ್ಲರನ್ನೂ ತತ್ತರಿಸುವಂತೆ ಮಾಡುತ್ತಿದೆ. ಸದ್ಯ ಗರಿಷ್ಠ ತಾಪಮಾನ