ಬೆಂಗಳೂರು : ಹೋಟೆಲ್ನಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮದ್ಯಪಾನ ಮಾಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಹೋಟೆಲ್ ನೌಕರನೊರ್ವನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಅಸ್ಸೋಂ ಮೂಲದ ಹಯಾನ್ ಎಂಬಾತ ಬಂಧಿತ ಆರೋಪಿಯಾಗಿದ್ದು, ರಿಚ್ಮಂಡ್ ರಸ್ತೆಯ ಪ್ರತಿಷ್ಠಿತ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಅದೇ ಹೋಟೆಲ್ನಲ್ಲಿ ತರಬೇತಿ ಪಡೆಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳ ಜೊತೆ ಸ್ನೇಹ ಬೆಳೆಸಿಕೊಂಡಿದ್ದ. ಇತ್ತೀಚೆಗೆ ತನ್ನ ಮನೆಯಲ್ಲಿ ನಡೆದ ಪಾರ್ಟಿಯೊಂದಕ್ಕೆ ವಿದ್ಯಾರ್ಥಿನಿಯನ್ನು ಆಹ್ವಾನಿಸಿ ಅಂದು ಆಕೆಗೆ