ಮೈಸೂರು : ಕಾಮುಕನೊಬ್ಬ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆಯೊಂದು ಬೆಳಕಿಗೆ ಬಂದಿದೆ.ದೊಡ್ಡಹೈದ (29) ಅತ್ಯಾಚಾರ ಎಸಗಿದ ಆರೋಪಿ. ಮಗುವಿನ ತಾಯಿಯ ದೂರದ ಸಂಬಂಧಿಯಾಗಿರುವ ಈತ ಆಟವಾಡಿಸುವುದಾಗಿ ಹೇಳಿ ನಿರ್ಜನ ಪ್ರದೇಶವಾದ ಹೆಚ್.ಡಿ.ಕೋಟೆ ತಾಲೂಕಿನ ಹಾಡಿಯೊಂದಕ್ಕೆ ಮಗುವನ್ನು ಕರೆದೊಯ್ದು ಈ ಕೃತ್ಯವೆಸಗಿದ್ದಾನೆ. ಮಹಿಳೆಯೊಬ್ಬರು ಈತ ಮಗುವಿನ ಜೊತೆ ಅಸಭ್ಯವಾಗಿ ವರ್ತಿಸುವುದನ್ನು ಕಂಡು ಸ್ಥಳಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಮಗುವಿನ ಮೇಲೆ ಅತ್ಯಾಚಾರವಾಗಿರುವುದು ವೈದ್ಯಕೀಯ ವರದಿಯಲ್ಲಿಯೂ