11ರ ಬಾಲಕಿ ಮೇಲೆ ರೇಪ್; ಅಪರಾಧಿಗೆ ಜೀವಾವಧಿ ಶಿಕ್ಷೆ

ಕಲಬುರಗಿ, ಸೋಮವಾರ, 11 ಫೆಬ್ರವರಿ 2019 (17:19 IST)

ಅಪ್ರಾಪ್ತೆ ಬಾಲಕಿಯನ್ನು ಬಲವಂತವಾಗಿ ರೇಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

2012 ರಲ್ಲಿ ಎತ್ತುಗಳಿಗೆ ನೀರು ಕುಡಿಸಲು ನಾಲೆಗೆ ಕರೆದುಕೊಂಡು ಹೋಗಿ ಬರುವಾಗ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಗಡಿ ಲಿಂಗದಳ್ಳಿಯ ಹೊಲವೊಂದರಲ್ಲಿ ರಮೇಶ ತಂದೆ ಹಣಮಂತ ವಡ್ಡರ್ (22) ಈತನು 11 ವರ್ಷದ ಬಾಲಕಿಯ ಮೇಲೆ ರೇಪ್ ಮಾಡಿದ್ದನು. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಪ್ಪ ಎಸ್. ಅವರು ಅಪರಾಧಿ ರಮೇಶ್ ಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ನೆರವು ಸಮಿತಿ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಣದಾಸೆಗೆ ಅಪ್ರಾಪ್ತ ಮಗಳಿಗೆ ಮದುವೆ ಮಾಡಲು ಮುಂದಾದ ತಾಯಿ

ಬೆಂಗಳೂರು : ಹಣದಾಸೆಗೆ ನೀಚ ತಾಯಿಯೊಬ್ಬಳು ತನ್ನ ಅಪ್ರಾಪ್ತ ಮಗಳನ್ನು ಈಗಾಗಲೇ ಮದುವೆಯಾದ ಯುವಕನಿಗೆ ಕೊಟ್ಟು ...

news

ವೈನ್ ಸ್ಟೋರ್ ನಲ್ಲಿ ಅಂಥದ್ದು ಏನಾಯ್ತು?

ವೈನ್ ಸ್ಟೋರ್ ವೊಂದರಲ್ಲಿ ಆಗಬಾರದ ಘಟನೆ ಆಗಿಹೋಗಿದೆ.

news

ಬಿಜೆಪಿಯವರು ಆಪರೇಷನ್ ಜಪ ಮಾಡ್ತಿದ್ದಾರಂತೆ!

ಬಿಜೆಪಿಯವರು ರಾಜ್ಯದ ಬರಗಾಲದ ಚಿಂತನೆ ಬಿಟ್ಟು‌ ಆಪರೇಷನ್ ಕಮಲದ ಬಗ್ಗೆ ಜಪ ಮಾಡುತ್ತಿದ್ದಾರೆ ಎಂದು ...

news

ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಕುಟುಂಬಕ್ಕೆ ಆಗಿದ್ದೇನು?

ಜಾತ್ರೆ ಹಾಗೂ ಸಭೆ ಸಮಾರಂಭಗಳಿಗಾಗಿಯೇ ಕಾಯುತ್ತಿದ್ದ ಅವರು ಮಾಡಬಾರದ ಕೆಲಸ ಮಾಡುತ್ತಲೇ ಜನರಿಗೆ ಶಾಕ್ ...