ಇತ್ತೀಚಿನ ದಿನಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಎರ್ರಾಬಿರ್ರಿಯಾಗಿ ವಾಹನ ಓಡಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ನಗರದ ಬಹುತೇಕ ರಸ್ತೆಗಳಲ್ಲಿ ಪಡ್ಡೆಹುಡುಗರು ಲಂಗು ಲಗಾಮಿಲ್ಲದೆ ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸುವುದರಿಂದ ಇತರ ಸವಾರರು ರಸ್ತೆಯಲ್ಲಿ ಓಡಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾದೆ. ಎಷ್ಟೋ ಜನ ಮಹಿಳೆಯರು ಮಕ್ಕಳು ಮತ್ತು ವೃದ್ದರು ಇಂತಹವರ ದುಸ್ಸಾಹಸದಿಂದ ಬಲಿಯಾಗುತ್ತಿದ್ದಾರೆ.