ದಶಕಗಳಿಂದ ಗಡಿನಾಡಿನ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಪಡಿತರ ಧಾನ್ಯದ ಮಾಫೀಯಾ ಅಡ್ಡೆಗಳನ್ನು ಒಂದೊಂದಾಗಿ ಹೆಡೆಮುರಿ ಕಟ್ಟುತ್ತಿರುವ ಜಿಲ್ಲಾಧಿಕಾರಿ ನೇತೃತ್ವದ ತಂಡಕ್ಕೆ ದಾಳಿ ವೇಳೆ ಸಿಕ್ರೇಟ್ ಡೈರಿ ದೊರೆತಿರುವುದು ಕುತೂಹಲ ಮೂಡಿಸಿದೆ.ಬೀದರ್ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ ನೇತೃತ್ವದ ಅಧಿಕಾರಿಗಳ ತಂಡ ಮತ್ತೊಂದು ದಾಳಿ ಮಾಡಿದ್ದು ದಾಳಿ ವೇಳೆಯಲ್ಲಿ ಸಿಕ್ರೇಟ್ ಡೈರಿಯೊಂದು ಪತ್ತೆಯಾಗಿದೆ ಎನ್ನಲಾಗಿದೆ.ಕಳೆದ ಒಂದು ವಾರದಿಂದ ಬೀದರ್ ಜಿಲ್ಲೆಯ ಹುಮನಾಬಾದ್, ಚಿಟಗುಪ್ಪ ಭಾಗದಲ್ಲಿ ದಾಳಿ ಮಾಡಿರುವ ಜಿಲ್ಲಾಡಳಿತ ತಡ ರಾತ್ರಿ ಎಸ್.ಪಿ