ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಬಯೋ ಮೆಟ್ರಿಕ್ ಕ್ಯಾನ್ಸಲ್ ಮಾಡಲಾಗಿದೆ. ಜೀವಮಾಪನ (ಬಯೋ ಮೆಟ್ರಿಕ್) ಮೂಲಕ ಪಡಿತರ ವಿತರಿಸುವುದರ ಬದಲು ಆಧಾರ್ ಆಧಾರಿತ ಮೊಬೈಲ್ ಓ.ಟಿ.ಪಿ. ಮೂಲಕ ಪಡಿತರ ವಿತರಣೆಗೆ ಕ್ರಮ ವಹಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ ಶರತ ಬಿ., ಪಡಿತರ ಅಂಗಡಿದಾರರಿಗೆ ಸೂಚನೆ ನೀಡಿದ್ದಾರೆ. ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ ಆಧಾರ್ನಲ್ಲಿ ನೋಂದಾಯಿಸಲ್ಪಟ್ಟಿದ್ದರೆ ಮಾತ್ರ ಅಂತಹ ಪಡಿತರ ಚೀಟಿದಾರರ ಮೊಬೈಲ್ಗೆ ಓ.ಟಿ.ಪಿ ಬರಲಿದೆ.