ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಫಾರಿ ಕೊಟ್ಟ ಪ್ರಕರಣದಲ್ಲಿ ಬಂಧಿತರಾಗಿರುವ ಪತ್ರಕರ್ತ ರವಿ ಬೆಳಗೆರೆ ನಿನ್ನೆ ರಾತ್ರಿಯಿಡೀ ಸಿಸಿಬಿ ಕಚೇರಿಯಲ್ಲಿ ಕಳೆದರು. ಅನಾರೋಗ್ಯಕ್ಕೊಳಗಾಗಿರುವ ಕಾರಣದಿಂದ ಮನೆಯಿಂದ ವಿಶೇಷ ಬೆಡ್ ತರಲು ರವಿ ಬೆಳೆಗೆರೆಗೆ ಅನುವು ಮಾಡಿಕೊಡಲಾಗಿತ್ತು. ಇದೇ ಬೆಡ್ ನಲ್ಲಿಯೇ ಅವರು ರಾತ್ರಿಯಿಡೀ ಕಳೆದರು.ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಮನೆ ಊಟ ತರಿಸಿಕೊಳ್ಳಲು ರವಿ ಬೆಳಗೆರೆಗೆ ಅವಕಾಶ ಮಾಡಿಕೊಡಲಾಗಿತ್ತು. ಅವರಿಗಾಗಿ ನಿಯೋಜನೆಗೊಂಡ ಒಂದು ಕೊಠಡಿಗೆ ಒಬ್ಬ ಕಾವಲುಗಾರ ಮತ್ತು