ಬೆಂಗಳೂರು: ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪತ್ರಕರ್ತ ರವಿ ಬೆಳಗೆರೆ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಎನ್ನಲಾಗಿದೆ. ಮೌನಕ್ಕೆ ಶರಣಾಗಿರುವ ರವಿ ಬೆಳಗೆರೆ ತೀರಾ ಬಳಲಿದವರಂತೆ ಕಂಡುಬಂದಿದ್ದಾರೆ. ಇನ್ನು ಅವರ ಆರೋಗ್ಯ ಸ್ಥಿತಿ ಇದೇ ರೀತಿ ಮುಂದುವರಿದರೆ ಆಸ್ಪತ್ರೆಗೆ ದಾಖಲಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.ನಿನ್ನೆಯೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರವಿ ಬೆಳಗೆರೆಗೆ ಚಿಕಿತ್ಸೆ ಕೊಡಿಸಿ ಮರಳಿ ಜೈಲಿಗೆ ಕರೆತರಲಾಗಿತ್ತು. ಈ ನಡುವೆ