ಐಪಿಎಲ್ 15ನೇ ಆವೃತ್ತಿಯ 5ನೇ ದಿನದ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಗಲಿದ್ದು, ಮುಂಬೈನ ಡಾ.ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಈಗಾಗಲೇ ಕಿಂಗ್ಸ್ ಪಂಜಾಬ್ ವಿರುದ್ಧ ಪರಾಭವಗೊಂಡಿರುವ ಆರ್ಸಿಬಿ ಗೆಲುವಿನ ಹಾದಿಯತ್ತ ನಡೆಯಲು ಸಜ್ಜಾಗಿದ್ದರೆ, ಇನ್ನೊಂದೆಡೆ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವಿನ ಶುಭಾರಂಭ ಮಾಡಿರುವ ಕೆಕೆಆರ್ ಜಯದ ಯಾತ್ರೆ