ಆಷಾಢ ಕಳೆದು ಶ್ರಾವಣ ಎಂಟ್ರಿ ಕೊಟ್ಟೆ ಬಿಡ್ತು. ಶ್ರಾವಣ ಮಾಸಕ್ಕಾಗಿ ಟಾಪ್ ನಲ್ಲಿ ವೆರಾಯಿಟಿ ಲಕ್ಷ್ಮೀಯರು ಮಾರ್ಕೆಟ್ ಗೆ ಬಂದಿದ್ದಾರಂತೆ. ಒಬ್ಬರಿಗೊಬ್ಬರು ಕಾಂಪಿಟೇಷನ್ ಕೊಡೋಕೆ ರೆಡಿಯಾಗಿದ್ದಾರಂತೆ. ಸೀರೆ ಹಾಗೂ ಅಲಂಕಾರದಲ್ಲಿ ಮಿಂಚುತ್ತಿರುವ ಲಕ್ಷ್ಮಿಯರು.. ಲೋಟಸ್ ನಲ್ಲಿ ಕುಳಿತು ಕಣ್ಮನ ಸೆಳೆಯುತ್ತಿರುವ ಲಕ್ಷ್ಮಿಯರು.. ಅಬ್ಬಬ್ಬಾ ಅಷ್ಟ ಸೌಭಾಗ್ಯಗಳ ಒಡತಿಯ ಅಲಂಕಾರವನ್ನು ನೋಡೋದೇ ಚೆಂದ ಕಣ್ರೀ.. ಹೌದು ಆಷಾಢ ಕಳೆದು ಶ್ರಾವಣ ಬರುತ್ತಿದ್ದಂತೆಯೇ ಸಾಲು ಸಾಲು ಹಬ್ಬಗಳ ಜೊತೆಗೆ ಹೆಣ್ಮಕ್ಕಳ ಅಚ್ಚುಮೆಚ್ಚಿನ ಹಬ್ಬಕ್ಕೂ ಎಲ್ಲ