ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಸೇರ್ಪಡೆಗೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಬಿಜೆಪಿ ಪಕ್ಷದಿಂದ ಉಪೇಂದ್ರ ಅವರನ್ನ ಸೆಳೆಯಲು ಪ್ರಯತ್ನ ನಡೆದಿದೆ ಎಂದು ವರದಿಗಳು ಕೇಳಿ ಬರುತ್ತಿವೆ. ನಾಳೆ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಚಿಂತನಾ ಸಭೆ ನಡೆಯುತ್ತಿದ್ದು, ಉಪೇಂದ್ರ ಸಹ ಈ ಸಭೆಯಲ್ಲಿ ಸಹ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಚಿಂತಕರು, ಬರಹಗಾರರು ಸೇರಿ 600 ಮಂದಿಗೆ ಆಹ್ವಾನ ನೀಡಲಾಗಿದ್ದು, ಉಪೇಂದ್ರ ಸಹ ಅದರಲ್ಲಿ ಒಬ್ಬರು