ಬೆಂಗಳೂರು: ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ರಜತ್ ಕಿಶನ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿಯೊಂದರ ಮಾಲಿಕರ ಜೊತೆ ಕಿತ್ತಾಟ ನಡೆಸಿದ ಘಟನೆ ವರದಿಯಾಗಿದೆ.ಈ ಸಂಬಂಧ ಬಸವೇಶ್ವರ ನಗರದ ಅಂಗಡಿ ಮಾಲಿಕ ಕಿರಣ್ ರಾಜ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ರಜತ್ ತಮ್ಮ ಅಂಗಡಿ ಮುಂದೆಯೇ ಕಾರು ಪಾರ್ಕ್ ಮಾಡಿದ್ದರು. ಇದರಿಂದ ತಮಗೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆಂದು ಬೇರೆಡೆ ಪಾರ್ಕ್ ಮಾಡುವಂತೆ ಕಿರಣ್ ಹೇಳಿದ್ದಾರೆ. ಈ ವೇಳೆ ಐದು ನಿಮಿಷದಲ್ಲಿ