ಬೆಂಗಳೂರು: ರಿಯಲ್ ರಾಜಕೀಯಕ್ಕೆ ಬರುವುದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷದ ಹೆಸರು ಅಧಿಕೃತವಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷಕ್ಕೆ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ(KPJP) ಎಂದು ಹೆಸರಿಟ್ಟಿದ್ದಾರೆ. ಇಂದು ಶಿವಾನಂದ ಸರ್ಕಲ್ ಬಳಿಯ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಈ ಮೊದಲು ಉಪೇಂದ್ರ ಪಕ್ಷಕ್ಕೆ ಪ್ರಜಾಕೀಯ, ಉತ್ತಮ ಪ್ರಜಾ ಪಾರ್ಟಿ ಎಂಬ ಹೆಸರಲ್ಲಿ ಕರೆಯುತ್ತಿದ್ದರು. ಇಂದು ಅಧಿಕೃತವಾಗಿ ಅದಕ್ಕೆ ನಾಮಕರಣ