ಬೆಂಗಳೂರು: ಡಿವೈಎಸ್ ಪಿ ಲಕ್ಷ್ಮೀ ಸಾವಿಗೆ ನಿಜವಾದ ಕಾರಣವೇನೆಂದು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಲಕ್ಷ್ಮೀಗೆ ಪೊಲೀಸ್ ಇಲಾಖೆಯಲ್ಲಿದ್ದ ಇನ್ನೊಬ್ಬ ಅಧಿಕಾರಿ ಜತೆಗಿನ ಸ್ನೇಹದ ವಿಚಾರವಾಗಿ ಸಹೋದರಿ ಜತೆ ಕಿತ್ತಾಟವಾಗಿತ್ತು. ಇದೇ ಅವರ ಸಾವಿಗೆ ಕಾರಣವಾಯ್ತು ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟ್ ಹುದ್ದೆಯಲ್ಲಿದ್ದ ಪುರುಷ ಅಧಿಕಾರಿ ಜತೆಗೆ ಲಕ್ಷ್ಮೀಗೆ ಸ್ನೇಹ ಸಲುಗೆಯಿತ್ತು. ಇದೇ ವಿಚಾರಕ್ಕೆ ಅವರ ಸಹೋದರಿ