ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನದ ಹೊಗೆಯಾಡಲು ಪ್ರಾರಂಭಿಸಿದೆ. ಸಚಿವ ಸ್ಥಾನ ವಂಚಿತರಾದ ಹಿರಿಯ ಹಾಗೂ ಪ್ರಭಾವಿ ಶಾಸಕರು ನಾಯಕತ್ವದ ವಿರುದ್ಧ ದಂಗೆಯೇಳುವ ಲಕ್ಷಣಗಳು ಕಂಡುಬರುತ್ತಿದ್ದು, ಶೀಘ್ರದಲ್ಲೇ ರಹಸ್ಯ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. 20ಕ್ಕೂ ಹೆಚ್ಚು ಶಾಸಕರ ರಹಸ್ಯ ಸಭೆ ಪ್ಲಾನ್ ಸಚಿವ ಸ್ಥಾನ ಸಿಗದೇ ತೀವ್ರ ನಿರಾಶೆಗೊಂಡಿರುವ