ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ನಡೆ ಎತ್ತ?

ಬೆಳಗಾವಿ, ಬುಧವಾರ, 27 ಮಾರ್ಚ್ 2019 (21:13 IST)

ಗಡಿ ನಾಡು ಬೆಳಗಾವಿಯಲ್ಲಿ ಕೈ ನಾಯಕರ ಬಂಡಾಯ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ. ಏತನ್ಮಧ್ಯೆ ಸುದ್ದಿಗೋಷ್ಠಿ ನಡೆಸಿರುವ ಸತೀಶ್ ಜಾರಕಿಹೊಳಿ ಅವರು, ರೆಬಲ್ ಶಾಸಕರಾಗಿರುವ ತಮ್ಮ ಸಹೋದರನ ನಡೆ ಬಗ್ಗೆ ಮಾತನಾಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಸಚಿವ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ರು. ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಶೇಷ ಯೋಜನೆ ಬಗ್ಗೆ ಘೋಷಣೆ ಮಾಡಿದ್ದಾರೆ. ಕಡು ಬಡವರಿಗೆ ತಿಂಗಳಿಗೆ 6 ಸಾವಿರ ನೀಡೋ ಯೋಜನೆ ಒಳ್ಳೆಯದು. ಈ ಯೋಜನೆಯಿಂದ ಬಡವರಿಗೆ ಅನುಕೂಲ ಆಗಲಿದೆ ಎಂದರು.

ಇನ್ನು, ಎಲ್ಲಾ ಪಕ್ಷದಲ್ಲಿ ಗೊಂದಲ ಸಹಜವಾಗಿದೆ ಎಂದ ಅವರು, ನಮ್ಮ ಪಕ್ಷದ ಅಸಮಾಧಾನ ಇತ್ಯರ್ಥ ಪಡಿಸುತ್ತೇವೆ ಎಂದರು.
ರೆಬಲ್ ಶಾಸಕ ರಮೇಶ ಜಾರಕಿಹೊಳಿ ತಟಸ್ಥವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಪಕ್ಷದಲ್ಲಿ ಇದು ಪಕ್ಷದ ಪರ ಕೆಲಸ ಮಾಡೋ ನಿರೀಕ್ಷೆ ಇದೆ ಅಂತ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

SSLC ಪರೀಕ್ಷೆ ಬರಿಯೋಕೆ ಹೋದ ವಿದ್ಯಾರ್ಥಿಗೆ ಎಂಥಾ ಗತಿ ಬಂತು?

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಆತುರವಾಗಿ ತೆರಳುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ...

news

ಮುದ್ದಹನುಮೇಗೌಡ ನಾಮಪತ್ರ ವಾಪಸ್?: ದೇವೇಗೌಡ್ರಿಗೆ ಗೆಲುವು ಸುಲಭದ ತುತ್ತಾ?

ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ರೆಬಲ್ ಆಗಿ ದೇವೇಗೌಡ್ರ ವಿರುದ್ಧ ಸ್ಪರ್ಧಿಸಿರೋ ...

news

ಸುಮಲತಾಗೆ ಜೈ ಎಂದ ಪ್ರಬಲ ಕೈ ನಾಯಕ

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಹೆಚ್. ಬಿ. ರಾಮು ಮಂಡ್ಯದಲ್ಲಿ ಸುಮಲತಾ ಪರವಾಗಿ ಬ್ಯಾಟ್ ...

news

ಸಿಎಂ ವಿರುದ್ಧ ಕೈ ನಾಯಕರು ಕಿಡಿಕಿಡಿ

ಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್ಸಿಗರು ಇನ್ನಿಲ್ಲದಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.