ರಾಜ್ಯ ಬಿಜೆಪಿಯಲ್ಲಿ ಆಗಾಗ್ಗೆ ಮುಂಚೂಣಿಗೆ ಬಂದು ಮರೆಯಾಗುತ್ತಿರುವ ಸಿಎಂ ಬದಲಾವಣೆ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪನವರನ್ನು ಕೆಳಗೆ ಇಳಿಸಲೇಬೇಕು ಎಂದು ಬಿಜೆಪಿಯ ಹಿರಿಯರು ಪ್ಲಾನ್ ಮಾಡುತ್ತಿರುವುದು ಬಹಿರಂಗಗೊಂಡಿದೆ ಎನ್ನಲಾಗಿದೆ.ಈ ಹಿಂದೆ ಕೆಲವು ಶಾಸಕರು ಅಲ್ಲಲ್ಲಿ ಸಭೆ ಸೇರಿ ಈ ಕುರಿತು ಚರ್ಚೆ ನಡೆಸಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.ಈಗ ಲಿಂಗಾಯತ ಶಾಸಕರು ಹಾಗೂ ಇತರ ಶಾಸಕರು ಬಣಗಳಾಗಿ ಪಕ್ಷದ ವರಿಷ್ಠರಿಗೆ ಸಿಎಂ ಬದಲಾವಣೆ ಮಾಡುವಂತೆ