ಕಾಣದೇ ಇರುವ ಭಗವಂತನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ಬದಲಾಗಿ ಮಕ್ಕಳಲ್ಲಿ, ಬಡವರಲ್ಲಿ, ದೀನ-ದುರ್ಬರಲ್ಲಿ ಭಗವಂತನನ್ನು ಕಂಡು ಶ್ರಮಿಸಿದರೆ ಭಗವಂತ ಒಲಿಯುತ್ತಾನೆ ಎಂಬುದು ಸಿದ್ಧಗಂಗಾ ಶ್ರೀಗಳ ಸಂದೇಶವಾಗಿದೆ ಎಂದು ಅವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ತೂಮಕೂರಿನ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಅನ್ನದಾಸೋಹ ಕಾರ್ಯಕ್ರಮದಲ್ಲಿ ಸುಮಾರು 10000 ಜನರಿಗೆ ದಾಸೋಹ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿದ್ಧಗಂಗಂಗಾ ಶ್ರೀಗಳು ಕಾಯಕದಲ್ಲಿ ನಿರತರಾಗಿ, ಕಾಯಕವೇ ಕೈಲಾಸ ಎಂದು