ಮಂಗಳೂರು: ಇದೆಲ್ಲಾ ನವರಾತ್ರಿ ಇಫೆಕ್ಟ್ ಎಂದರೂ ತಪ್ಪಾಗಲಾರದು. ರಾಜ್ಯದ ಶ್ರೀಮಂತ ದೇಗುಲಗಳ ಪೈಕಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲದ ಕಾಣಿಕೆ ಹುಂಡಿಯಿಂದ ಕೋಟಿ ರೂ. ಸಂಗ್ರಹವಾಗಿ ದಾಖಲೆ ಮಾಡಿದೆ. 1.10 ಕೋಟಿ ರೂ. ಹೆಚ್ಚು ಕಾಣಿಕೆ ಸಂಗ್ರಹವಾಗಿದ್ದು, ಇದು ಈವರೆಗಿನ ಅತೀ ಹೆಚ್ಚು ದಾಖಲೆಯಾಗಿದೆ. ಈ ತಿಂಗಳು ನವರಾತ್ರಿ ಹಬ್ಬವಿದ್ದದ್ದರಿಂದಲೋ, ಸಾಲುಸಾಲು ರಜೆಯಿದ್ದಿದ್ದರಿಂದಲೋ ದೇವಾಲಯಕ್ಕೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು.ಕಳೆದ ವರ್ಷ 1.6 ಕೋಟಿ ರೂ. ಸಿಕ್ಕಿದ್ದೇ