ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ತುಮಕೂರಿನ ಸಿದ್ದಗಂಗಾ ಶ್ರೀಗಳಿಗೆ ಹೊಸದಾಗಿ 2 ಸ್ಟೆಂಟ್ಗಳನ್ನು ಅಳವಡಿಸಲಾಗಿದೆ. ಬೆಳಿಗ್ಗೆ ಶ್ರೀಗಳಿಗೆ ಹೊಸದಾಗಿ ಸ್ಟೆಂಟ್ಗಳನ್ನು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಅಳವಡಿಸಲಾಯಿತು. ನಂತರ ಅವರನ್ನು ವಾರ್ಡ್ಗೆ ದಾಖಲಿಸಲಾಗಿದೆ. ಎಂಡೋಸ್ಕೊಪಿ ಮೂಲಕ ಶ್ರೀಗಳಿಗೆ ಹೊಸದಾಗಿ ಸ್ಟೆಂಟ್ ಅಳವಡಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರಾದ ರವೀಂದ್ರ ತಿಳಿಸಿದ್ದಾರೆ.ಶ್ರೀಗಳಿಗೆ ಈ ಹಿಂದೆ 9 ಸ್ಟೆಂಟ್ಗಳನ್ನು ಅಳವಡಿಸಲಾಗಿತ್ತು. ಆದರೆ, 2 ಸ್ಟೆಂಟ್ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗಾಗಿ, ಹಳೆಯ ಸ್ಟೆಂಟ್ಗಳನ್ನು ತೆಗೆದು