ಆ ಜನರು ಮಹಾಮಳೆಗೆ ತತ್ತರಿಸಿ ಹೋಗಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಸಂತ್ರಸ್ತರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.ನಿರಾಶ್ರಿತರ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ ಎಂದು ಅರೋಪಿಸಿ ದಿಢೀರ್ ಅಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಈ ಘಟನೆ ನಡೆದಿದೆ.ಮದ್ಯಾಹ್ನ ಊಟ ಕೊಡಬೇಕಾದ ಕೇಂದ್ರದಲ್ಲಿ ಸಂಜೆ ನಾಲ್ಕು ಘಂಟೆ ವೇಳೆಗೆ ಊಟ ನೀಡಿದ್ದಾರೆ. ಆದರೆ ಊಟಕ್ಕೆ ಅರ್ಧ ಬೆಂದಿರುವ ಅನ್ನ ನೀಡಿದ್ದಾರೆ ಎಂದು ನಿರಾಶ್ರಿತರು