ಶಿವಯೋಗ ಮಂದಿರ ಜಂಗಮರಿಗೆ ಮಾತ್ರ ಸೀಮಿತವಾಗಿದೆ. ಶಿವಯೋಗ ಮಂದಿರವನ್ನು ಕೆಲವೇ ಜಂಗಮರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸ್ವಾಮೀಜಿಯೊಬ್ಬರು ವಿವಾದಿತ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಸಿದ್ದಗಿರಿ ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಶಿವಯೋಗ ಮಂದಿರ ಜಂಗಮರಿಗೆ ಮಾತ್ರ ಸೀಮಿತವಾಗಿದೆ. ಶಿವಯೋಗ ಮಂದಿರವನ್ನು ಕೆಲವೇ ಜಂಗಮರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಒಂದು ಉದ್ಯೋಗ ನೀಡುವ ಕಚೇರಿಯಂತೆ ಮಾಡಿದ್ದಾರೆ. ಮಠಗಳಲ್ಲಿ ಸನ್ಯಾಸಿಗಳ ಸಂಬಂಧಿಕರೇ ತುಂಬಿಕೊಂಡಿದ್ದಾರೆ. ವೀರಶೈವ ಮತ್ತು ಲಿಂಗಾಯತ ಮಹಾಸಭಾ ಈ ಕುರಿತು ಚಿಂತನೆ ನಡೆಸಲಿ. ಮಠದಲ್ಲಿರುವ ಸಂಬಂಧಿಗಳ ಪಾರುಪತ್ಯ ಕುರಿತು