ಲಾಕ್ ಡೌನ್ ನಲ್ಲಿ ಸಡಿಲಿಕೆ; ಭಾನುವಾರದಂದು ಮದುವೆ ಮಾಡಲು ಸರ್ಕಾರ ಅನುಮತಿ

ಬೆಂಗಳೂರು| pavithra| Last Modified ಗುರುವಾರ, 21 ಮೇ 2020 (10:21 IST)
ಬೆಂಗಳೂರು : ಭಾನುವಾರದಂದು ಮದುವೆ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಆ ಮೂಲಕ ಮದುಮಕ್ಕಳು, ಕುಟುಂಬಸ್ಥರ ಟೆನ್ಷನ್ ಗೆ ರಿಲೀಫ್ ನೀಡಿದೆ.
> ವಾರದಲ್ಲಿ ಎಲ್ಲಾ ದಿನ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಆದರೆ ಭಾನುವಾರದಂದು ಮಾತ್ರ ಜನತಾಕರ್ಪ್ಯೂ ಇರುವ ಕಾರಣ ಜನಸಾಮಾನ್ಯರು ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ಸರ್ಕಾರ ಈ ಹಿಂದೆ ತಿಳಿಸಿದೆ. ಆದರೆ ಭಾನುವಾರದಂದು ಮದುವೆ ದಿನ ನಿಗದಿಯಾದವರಿಗೆ ಇದರಿಂದ ಆತಂಕ ಶುರುವಾಗಿತ್ತು. >
ಆದರೆ ಇದೀಗ ಮಾಧ್ಯಮದ ವರದಿಯಿಂದ ಎಚ್ಚೆತ್ತ ಸರ್ಕಾರ ನಿಯಮದಲ್ಲಿ  ಸಡಿಲಿಕೆ ಮಾಡಿ ಮದುವೆ ವಿಶೇಷ ಪ್ರಕರಣ ಅಂತ ಪರಿಗಣನೆಗೆ ತೆಗೆದುಕೊಂಡು ಲಾಕ್ ಡೌನ್ ನಡುವೆ ಭಾನುವಾರ ಮದುವೆ ಮಾಡಬಹುದು. ಭಾನುವಾರ ನಿಗದಿಯಾದ ಮದುವೆಗಳಿಗೆ ಅಡ್ಡಿ ಇಲ್ಲ ಎಂದು ತಿಳಿಸಿದೆ.


ಇದರಲ್ಲಿ ಇನ್ನಷ್ಟು ಓದಿ :