ಬೆಂಗಳೂರು: ಮತ್ತೆ ಗಣೇಶೋತ್ಸವ ಬಂದಿದೆ. ಚೌತಿ ಹಬ್ಬಕ್ಕೆ ಮನೆಯಲ್ಲಿ, ಬೀದಿ ಬೀದಿಗಳಲ್ಲಿ ಗಣೇಶನ ಕೂರಿಸಿ ಪೂಜೆ ಮಾಡುವುದು ನಮ್ಮ ಪದ್ಧತಿ.ಆದರೆ ಈ ರೀತಿ ಮಾಡುವ ಮೊದಲು ಕೆಲವು ವಿಚಾರಗಳನ್ನು ನೆನಪಲ್ಲಿಡುವುದು ಒಳಿತು. ಗಣೇಶ ಹಬ್ಬಕ್ಕೆ ಬೇರೆಯವರಿಗಿಂತ ದೊಡ್ಡ ಮೂರ್ತಿ ಕೂರಿಸಬೇಕೆಂದು ಸ್ಪರ್ಧೆಗೆ ಬೀಳುವುದು, ಪಿಒಪಿ ಗಣಪನ ತಂದು ಎಲ್ಲೆಂದರಲ್ಲಿ ಹಾಕಿ ಪರಿಸರಕ್ಕೆ ಹಾನಿ ಮಾಡುವುದು ಇತ್ಯಾದಿ.ಭಕ್ತಿಯಿಂದ ಪೂಜೆ ಮಾಡಲು ಗಣೇಶನ ದೊಡ್ಡ ಮೂರ್ತಿಯೇ ಆಗಬೇಕೆಂದಿಲ್ಲ. ಚಿಕ್ಕದಾದ ಮಣ್ಣಿನ ಗಣಪನ ಕೂರಿಸಿದರೂ