ದೇವಸ್ಥಾನ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಸಂಬಂಧ ಕಳೆದ ವರ್ಷ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದೇ ತಿಂಗಳು ಮಾರ್ಚ್ 22 ರಿಂದ ರಂಜಾನ್ ಪ್ರಾರಂಭವಾಗುವ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಮಸೀದಿಗಳಲ್ಲಿ ನಸುಕಿನ ಜಾವ 5 ರಿಂದ 5:30 ವರೆಗು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡಬೇಕೆಂದು ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕ ಸಿ.ಟಿ ರವಿಯವರಿಗೆ ಮನವಿ ಮಾಡಿದ್ದಾರೆ.