ದೆಹಲಿಯಲ್ಲಿ ದೇಹ ಕೊರೆಯುವಷ್ಟು ಚಳಿ ಇದೆ. ಮುಂದಿನ 5 ದಿನ ಶೀತ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಾನಗರ ಪಾಲಿಕೆ ಅಮಾನವೀಯವಾಗಿ ನಡೆದುಕೊಂಡಿದೆ. 80 ವರ್ಷದ ವೃದ್ಧೆ ವಾಸವಿದ್ದ ಮನೆಯನ್ನು ಅಕ್ರಮ ಎಂದು ಹೇಳಿ ನಾಶಪಡಿಸಿದೆ. ಹಿರಿಜೀವ ಈಗ ಬೀದಿಗೆ ಬಿದ್ದಿದ್ದು, ಚಳಿಗೆ ಮೈಯೊಡ್ಡಿ ಬದುಕಬೇಕಿದೆ. ದೆಹಲಿ ಮಹಾಪಾಲಿಕೆಯ ಸಿಬ್ಬಂದಿ, ಶ್ವಾನಪ್ರೇಮಿ ಪ್ರತಿಮಾದೇವಿ ಎಂಬ ಹಿರಿಜೀವದ ಮನೆಯನ್ನು ಒಡೆದು ಹಾಕಿ, ಸಾಮಾನು ಸರಂಜಾಮುಗಳನ್ನು ಅಲ್ಲಿಂದ